ಸ್ನೇಹಲೋಕ

ಸ್ನೇಹಲೋಕ
ಸ್ನೇಹಲೋಕ

Tuesday, December 22, 2009

ಸ್ನೇಹಲೋಕದ ದ್ವಿತೀಯ ಸಹಕೂಟ

ಗೆಳೆಯರೆ ಇದು ನಮ್ಮ ಸ್ನೇಹಲೋಕದ ದ್ವಿತೀಯ ಸಹಕೂಟದ ಸಂಭ್ರಮ. ಇದನ್ನು ಆಗಸ್ಟ್ ೩೦ ೨೦೦೯, ಮಧ್ಯಾ ಏರ್ಪಡಿಸಲಾಯಿತು

Thursday, December 17, 2009

ಸ್ನೇಹಲೋಕದ ಮೊದಲ ಸಹಕೂಟ.

ದಿನಾಂಕ ೧೫ ಆಗಷ್ಟ್ ೨೦೦೯ ರಂದು ಲುಂಬಿನಿ ಗಾರ್ಡನ್ಸ್, ಬೆಂಗಳೂರು, ಇಲ್ಲಿ ಏರ್ಪಡಿಸಲಾದ ಸ್ನೇಹಿತರ ಸಹಕೂಟ ಕಾರ್ಯಕ್ರಮವೂ ಸ್ನೇಹಲೋಕ ಗೆಳೆಯರ ಬಳಗದ ಮೊಟ್ಟ ಮೊದಲ ಮಿಲನದ ಸಮಯ. ಅಂದಿನ ದಿನಕ್ಕಾಗಿ ಎಲ್ಲಾ ಗೆಳೆಯರು ಎಷ್ಟೋ ಉತ್ಸಾಹದಿಂದ ಕಾಯುತ್ತಿದ್ದ ಸಮಯ ಬಂದೇ ಬಂದಿತು.

ಎಲ್ಲರೂ ಬೆಳಗ್ಗೆ ೧೧:೩೦ಕ್ಕೆ ಸೇರಬೇಕು ಎಂದು ನಿರ್ಧರಿಸಿದ್ದೆವು, ಸಮಯ ಆಗುತ್ತಿದ್ದಂತೆಯೆ ಒಬ್ಬೊಬ್ಬರು ಸ್ಥಳಕ್ಕೆ ಧಾವಿಸತೊಡಗಿದರು.  ಎಲ್ಲರ ಮುಖದಲ್ಲೂ ಏನೋ ಒಂದು ರೀತಿಯ ಕಳವಳ, ಸಂತೋಷ ಉಕ್ಕಿ ಹರಿಯುತ್ತಿತ್ತು. ಒಬ್ಬೊಬ್ಬರು ಆಗಮಿಸುತ್ತಿದ್ದಂತೆಯೆ ಕಿರು ದರಹಾಸದೊಂದಿಗೆ ಸ್ವಪರಿಚಯ ಮಾಡಿಕೊಂಡರು.

ಎಲ್ಲರ ಪರಿಚಯ ಮುಗಿದನಂತರ ಲುಂಬಿನಿ ಗಾರ್ಡನ್ಸ್ ಒಳ ಹೋಗಲು ಟಿಕೆಟ್ ಕರೀದಿಯಲ್ಲಿ ಸಂದೀಪ್ ಮುಖ್ಯ ಪಾತ್ರ ವಹಿಸಿದರು.  ಏಕೆಂದರೆ ನಮ್ಮ ಮೊದಲ ಸಹಕೂಟದ ಮುಖ್ಯಸ್ಥಿಕೆಯನ್ನು  ಸಂದೀಪ್ ವಹಿಸಿಕೊಂಡಿದ್ದರೂ. ಎಲ್ಲಾ ಕರ್ಚುವೆಚ್ಚಗಳು ಅವರದ್ದೇ ಆಗಿತ್ತು.  ಅಂತೂ ಟಿಕೆಟ್ ಕರೀದಿ ನಂತರ ಎಲ್ಲರೂ ಒಳ ಹೊಕ್ಕಿದೆವು.



ಅಲ್ಲಿನ ಪ್ರಶಾಂತ ವಾತಾವರಣದಲ್ಲಿ, ಈ ಮೊದಲ ಸಂದಿಕೆಯ ಮನೋಲ್ಲಾಸ ಎಲ್ಲರ ಮನದಲ್ಲಿ ಒಂದು ಚಿರಚಿತ್ರವನ್ನು ಬಿಡಿಸಿತು. ಹೊಸ ಗೆಳೆತನದ ಹೊಸ ಆತ್ಮೀಯತೆಗಳ ಹೊಸ ಅನುಭವ, ಆಹಾ..... ಎಂತಹ ಆನಂದ ಸಮಯ ಇದು...

ಎಲ್ಲರೂ ಒಳಗಡೆ ಸುತ್ತಾಡಿದೆವೂ, ಅಲ್ಲಿರುವ ಕೆಳವೊಂದು ಆಟಗಳಲ್ಲಿ ಭಾಗವಹಿಸಿದೆವು, ಒಂದು ಆಟದಲ್ಲಿ ಸೋಪ್  ಬಾಕ್ಸ್ ಸಹಿತ ಗೆದ್ದೆವೂ, ಹಾಗೆ ಮಾತನಾಡುತ್ತಾ ಇದ್ದುದ್ದರಿಂದ ಊಟದ ಸಮಯ ಆಯಿತೆಂಬ ಅರಿವೆ ಮನದ ಕಡೆ ಸುಳಿಯಳಿಲ್ಲ.




ಮಧ್ಯನದ ವೇಳೆಯಲ್ಲಿ ಊಟಕ್ಕೆಂದು ಪಲಾವ್, ನೂಡಲ್ಸ್, ಈರುಳ್ಳಿ ಪಕೋಡಿ, ಇನ್ನಿತರ ಭೋಜನ ಪಧಾರ್ತಗಳನ್ನು ತರಿಸಿಕೊಂಡೆವೂ ಎಲ್ಲವನ್ನೂ ತಿಂದು ಸ್ವಲ್ಪ ಸಮಯ ಎಲ್ಲರೂ ಮಾತಾಡಿ ಹೊರಡುವ ವೇಳೆಗೆ ೩:೩೦ ಆಯಿತು.




ಎಲ್ಲರು ಮತ್ತೊಮ್ಮೆ ವಂದನೆಗಳೊಂದಿಗೆ ತಮ್ಮ ಮನೆಯ ಕಡೆ ಹೆಜ್ಜೆ ಹಾಕಿದರೂ.